*ಸುಧೀರ ನಾಯರ್
ಜೈ..ಜೈ..ದ್ಯಾಮವ್ವ ಶಬ್ಧ ಘೋಷದ ಅಬ್ಬರ್... ದಿನವಿಡಿ ಭಂಡಾರ ಎರಚಿದ ಸ್ಥಳೀಯರು... ಗ್ರಾಮವೆಲ್ಲಾ ಭಂಡಾರಮಯ... ದಿನದಿಂದ ದಿನಕ್ಕೆ ರಂಗೇರಿದ ಜಾತ್ರಾಮಹೋತ್ಸವ..! ಎಲ್ಲಿ ಅನ್ನುತ್ತಿರಾ.? ಇದು ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತಿರುವ ಮೂಡಲಗಿ ಸಮೀಪದ ಬೆಟಗೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರೆಯ ನಾಲ್ಕನೇಯ ದಿನವಾದ ಗುರುವಾದಂದು ಗ್ರಾಮದಲ್ಲಿ ಕಂಡುಬಂದ ದೃಶ್ಯಗಳು..
ನಾಲ್ಕನೇಯ ದಿನವಾದ ಇಂದು ಸಹ ಧಾಮರ್ಿಕ ವಿಧಿ ವಿಧಾನಗಳ ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಗೆ ಸ್ಥಳೀಯ ಅಂಬೇಡ್ಕರ್ ವೃತ್ತ ಮತ್ತು ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕೂಡ್ರಿಸಲಾದ ಗ್ರಾಮದೇವಿ ಮೂತರ್ಿಗೆ ಸ್ಥಳೀಯರಿಂದ ಉಡಿ ತುಂಬುವ, ಪೂಜೆ, ಪುನಸ್ಕಾರ, ನೈವೇಧ್ಯ ಅರ್ಪಣೆ, ಗ್ರಾಮದೇವಿಯ ದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಡಗರದಿಂದ ನಡೆದವು. ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ಜಾತ್ರೆಗೆ ಕಳೆಬಂದಿತ್ತು.
ಮುಂಜಾನೆ 12 ಗಂಟೆಗೆ ದೇವಿಯ ಮೂತರ್ಿಯನ್ನು ಅಂಬೇಡ್ಕರ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಸ್ಥಳೀಯ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತಂದು ಕೂಡ್ರಿಸಲಾಯಿತು. ಮದ್ಯಾಹ್ನ 2 ಗಂಟೆಗೆ ನಿಮಿಷದ ಬಂಡಿ ಶತರ್ು ನಡೆಯಿತು. ಐದು ದಿನಗಳವರೆಗೆ ನಡೆಯಲಿರುವ ಜಾತ್ರೆಗೆ ಗ್ರಾಮದಲ್ಲೆಡೆ ಗ್ರಾಮದೇವಿಯ ಭಕ್ತಿ-ಭಾವದ ಹೊಳೆ ಹರಿಯುತ್ತಿದೆ. ಭಂಡಾರ ಎರಚಾಟದ ಕೊನೆಯ ದಿನವಾಗಿದ್ದರಿಂದ ಇಂದು ದಿನವಿಡಿ ಮಕ್ಕಳು, ಯುವಕರು ಒಬ್ಬರಿಗೂಬ್ಬರೂ ಭಂಡಾರ ಎರಚಿ ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳು ಭಂಡಾರ ಮಯವಾಗಿ ಗೋಚರಿಸುತ್ತಿವೆ. ಮಕ್ಕಳು, ಯುವಕರು, ಮಹಿಳೆಯರಿಂದ ಜೈ..ಜೈ..ದ್ಯಾಮವ್ವ ಶಬ್ಧ ಘೋಷದ ಅಬ್ಬರ್ ಗ್ರಾಮದೆಲ್ಲೆಡೆ ಸದಾ ಝೆಕಂರಿಸಿತು.
ರಾತ್ರಿ 8ಗಂಟೆಗೆ ಸ್ಥಳೀಯ ಗಜಾನನ ವೇದಿಕೆ ಮೇಲೆ ದೂರದರ್ಶನ ಕಲಾವಿದ ಅಜಯ ಸಾರಾಪೂರೆ ಅವರಿಂದ ನಗೆ ಹಬ್ಬ, ಝೀ ವಾಹಿನಿ ಕಲಾವಿದೆ ಘೋಡಗೇರಿಯ ಕುಮಾರಿ ಲಕ್ಷ್ಮೀ ತಳವಾರ ಅವರಿಂದ ಸಂಗೀತ ಕಾರ್ಯಕ್ರಮ, ಮಮದಾಪೂರದ ಲಕ್ಷ್ಮೀ ಒಡೆಯರ ತಂಡದವರಿಂದ ಭರತನಾಟ್ಯ, ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ನೋಡುಗರ ಮನರಂಜಿದವು.
ಗ್ರಾಮದ ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಯುವಕ- ಯುವತಿಯರು, ಮಕ್ಕಳು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು, ಗ್ರಾಮ ದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು ಇಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇಂದಿನ ಕಾರ್ಯಕ್ರಮ : ಗ್ರಾಮದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಕೊನೆಯ ದಿನವಾದ ಶುಕ್ರವಾರ ಆ.10 ರಂದು ಮುಂಜಾನೆ7 ಗಂಟೆಗೆ ಪುರಜನರಿಂದ ಶ್ರೀ ದೇವಿಗೆ ಉಡಿ ತುಂಬುವ, ನೈವೇಧ್ಯ ಅರ್ಪಣೆ ಕಾರ್ಯಕ್ರಮ ನಡೆದ ಬಳಿಕ 10 ಗಂಟೆಗೆ ಸತ್ಕಾರ ಸಮಾರಂಭ ನಡೆಯಲಿದೆ. ಮುಗಳಖೋಡದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ. ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ, ಮಮದಾಪೂರದ ಮೌನ ಮಲ್ಲಿಕಾಜರ್ುನ ಸ್ವಾಮಿಜಿ, ಕಡಕೋಳದ ಸಿದ್ರಾಯಜ್ಜನವರು ಸಮಾರಂಭದ ನೇತೃತ್ವ ವಹಿಸಲಿದ್ದಾರೆ. ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸತ್ಕಾರ ಮೂತರ್ಿಗಳಾಗಿ ಆಗಮಿಸಲಿದ್ದಾರೆ.
ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಸಂತ ಶರಣರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಗಣ್ಯರಿಗೆ, ದಾನಿಗಳಿಗೆ ಜಾತ್ರಾಮಹೋತ್ಸವ ಸಮಿತಿ ವತಿಯಿಂದ ಸತ್ಕಾರ ನಡೆಯಲಿದೆ. ಶುಕ್ರವಾರ.ಆ10ರಂದು ಸಂಪೂರ್ಣ ಭಂಡಾರ ಆಡುವದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಂದು ರಾತ್ರಿ ಶ್ರೀ ದೇವಿಯನ್ನು ಸೀಮೆಗೆ ಕಳುಹಿಸುವ ಮೂಲಕ ಪ್ರಸಕ್ತ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.